ಕನ್ನಡ ವ್ಯಾಕರಣ
1. ಅಕ್ಷರಗಳ ಸ್ವರಗಳ ಆಧಾರದ ಮೇಲೆ ಲಘು – ಗುರು – ಪ್ಲುತ ಎಂದು ವಿಭಜಿಸುವುದನ್ನು ಮಾತ್ರೆಗಳು ಎಂದು ಕರೆಯುವರು. ಮಾತ್ರೆಗಳನ್ನು ಅಕ್ಷರ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಡಿಸಲಾಗಿದೆ.
2. ಲಘು – ಒಂದು ಮಾತ್ರೆ ಕಾಲದಲ್ಲಿ ಉಚ್ಚರಿಸಲ್ಪಡುವ ಅಶ್ರರಗಳನ್ನು ಸೂಚಿಸಲು ಲಘು ಎಂದು ಹೇಳಲಾಗುತ್ತದೆ.
3. ಲಘು – ವಿನ ಬೆಲೆ – ಒಂದು
4. ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸೂಚಿಸಲು ಬಳಸುವುದೇ ಗುರು ಎಂದು ಕರೆಯುವರು.
5. ಗುರುವಿನ ಬೆಲೆ – ಎರಡು
6. ಗುರುವನ್ನು ಸೂಚಿಸಲು ‘ - ’ ಸಂಕೇತ ಬಳಸಲಾಗುತ್ತದೆ.
7. ಲಘುವನ್ನು ಸೂಚಿಸಲು “ U ” ಸಂಕೇತ ಬಳಸಲಾಗುತ್ತದೆ.
8. ಪ್ಲುತ – ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲವನ್ನು ಸೂಚಿಸಲು ಬಳಸುವುದೇ ಪ್ಲುತ
9. ಪ್ಲುತ ಇದರ ಬೆಲೆ ಮೂರು
10. ಪ್ಲುತ ವನ್ನು ಸೂಚಸಲು “ ಎಸ್ ” ಸಂಕೇತವನ್ನು ಬಳಸುತ್ತಾರೆ.
11. ಪ್ರಾಸ – ಪದ್ಯದ ಪ್ರತಿ ಪಾದದ ಆದಿಯ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದನ್ನು ಪ್ರಾಸ ಎನ್ನುತ್ತೇವೆ.
12. ಪ್ರಾಸ ಎಂಬ ಪದ ಸಂಸ್ಕೃತ ಭಾಷೆಯಿಂದ ಬಂದಿದೆ.
13. ಆದಿ ಪ್ರಾಸ – ಪದ್ಯದ ಆದಿಯಲ್ಲಿ ಪ್ರಾಸಕ್ಷರವು ಬಂದರೆ ಅದನ್ನು ಆದಿ ಪ್ರಾಸ ಎನ್ನುವರು. ಇದನ್ನು ಬಂಡ ಪ್ರಾಸ ಎಂತಲೂ ಕರೆಯುವರು.
14. ಮಧ್ಯ ಪ್ರಾಸ – ಪದ್ಯದ ಮಧ್ಯಭಾಗದಲ್ಲಿ ಒಂದೇ ರೀತಿಯ ವ್ಯಂಜನಗಳಿದ್ದರೆ ಅದಕ್ಕೆ ಮಧ್ಯ ಪ್ರಾಸ ಎನ್ನುವರು.
15. ಮಧ್ಯ ಪ್ರಾಸದ ಬಳಕೆ ತ್ರಿಪದಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
16. ಅಂತ್ಯ ಪ್ರಾಸ – ಪ್ರತಿಯೊಂದು ಪಾದದ ಅಂತ್ಯಕ್ಷರ ನಿಯಮಿತವಾಗಿ ಪುನಾರವರ್ತನೆಯಾಗುವುದನ್ನು ಅಂತ್ಯಪ್ರಾಸ ಎನ್ನುವರು.
17. ರಗಳೆಯ ಸಾಮಾನ್ಯ ಅಂತ್ಯ ಪ್ರಾಸ ಹೊಂದಿರುತ್ತದೆ. ಕವಿರಾಜ ಮಾರ್ಗಕಾರ ಅಂತ್ಯಪ್ರಾಸ ಶ್ರೇಷ್ಠವಾದುದು ಎಂದಿದ್ದಾನೆ.
18. ಪದ್ಯದ ಮೊದಲ ಮೊತ್ರೆ ಗುರುವಾಗಿದ್ದರೆ ಉತ್ಪಲಮಾಲೆ ( - ).
19. ಪದ್ಯದ ಮೊದಲ ಮೂರು ಮಾತ್ರೆಗಳು ಗುರುವಾಗಿದ್ದರೆ ಶಾರ್ದೂಲ ವಿಕ್ರೀಡಿತ ( - - - ).
20. ಪದ್ಯದ ಮೊದಲ ಮೂರು ಮಾತ್ರೆಗಳು ಕ್ರಮವಾಗಿ ಗುರುವಾದರೆ ಸ್ರಗ್ದರೆ ( - - - - ).
21. ಪದ್ಯದ ಆದಿ ಎರಡು ಲಘು ಎರಡು ಗುರು ಬಂದರೆ ಮತ್ತೆಬಾ ವಿಕ್ರೀಡಿತ ( U U - - ).
22. ಪದ್ಯದ ಆದಿಯಲ್ಲಿ ಎರಡು ಲಘು ಬಂದು ನಂತರ ಗುರುವಿದ್ದರೆ – ಮಹಾಸ್ರಗ್ದರೆ ( UU - -)
23. ಪದ್ಯದ ಮೊದಲ ನಾಲ್ಕು ಮಾತ್ರೆಗಳು ಲಘುವಾಗಿದ್ದರೆ ಚಂಪಕ ಮಾಲೆ ( U U U U ).
24. ಒಂದು ಭಾಷೆ ಬಳಸುವ ಮೂಲ ವರ್ಣಗಳ ಪಟ್ಟಿಯನ್ನು ಅಥವಾ ವರ್ಣಗಳ ಗುಂಪನ್ನು ವರ್ಣಮಾಲೆ ಎಂದು ಕರೆಯುತ್ತಾರೆ.
25. ಕನ್ನಡ ವರ್ಣ ಮಾಲೆಯಲ್ಲಿ ಪ್ರಸ್ತುತ ಕಾಲಾವಧಿಯಲ್ಲಿ 49 ಅಕ್ಷರಗಳು ಮಾತ್ರ ಬಳಸಲಾಗುತ್ತಿದೆ.
26. ಕನ್ನಡ ವರ್ಣಮಾಲೆಯನ್ನು ಅವುಗಳ ಗುಣ ಸ್ವರೂಪಕ್ಕೆ ಅನುಗುಣವಾಗಿ ಮೂರು ವಿಧಗಳಿವೆ
27. ಕನ್ನಡ ವರ್ಣಮಾಲೆಯ ವಿಧಗಳು – ಸ್ವರಗಳು , ವ್ಯಂಜನಗಳು , ಯೋಗವಾಹಕಗಳು
28. ಸ್ವರಗಳಲ್ಲಿರುವ ಅಕ್ಷರಗಳು – 13
29. ವ್ಯಂಜನಗಳಲ್ಲಿರುವ ಕ್ಷರಗಳ ಸಂಖ್ಯೆ – 34
30. ಯೋಗವಾಹಕಗಳಲ್ಲಿರುವ ಅಕ್ಷರಗಳ ಸಂಖ್ಯೆ -2
31. ಸ್ವಗಳಲ್ಲಿ ಎರಡು ವಿಧ – ಹ್ರಸ್ವ ಸ್ವರ , ದೀರ್ಘಸ್ವರ
32. ಹ್ರಸ್ವ ಸ್ವರಗಳಲ್ಲಿ ಒಟ್ಟು 6 ಅಕ್ಷರಗಳಿವೆ
33. ದೀರ್ಘ ಸ್ವರಗಳಲ್ಲಿ ಒಟ್ಟು 7 ಅಕ್ಷರಗಳಿವೆ
34. ಹ್ರಸ್ವ ಸ್ವರಗಳು – ಅ, ಇ, ಉ, ಋ, ಎ, ಒ
35. ದೀರ್ಘ ಸ್ವರಗಳು – ಆ, ಈ, ಊ, ಏ, ಐ, ಓ, ಔ
36. ಹ್ರಸ್ವ ಸ್ವರ ಎಂದರೆ – ಏಕಮಾತ್ರ ಕಾಲದಲ್ಲಿಲ ಉಚ್ಚರಿಸಲ್ಪಡುವ ಅಕ್ಷರಗಳೇ ಹ್ರಸ್ವ ಸ್ವರಗಳು ಎಂದು ಕರೆಯುವರು.
37. ದೀರ್ಘ ಸ್ವರ ಎಂದರೆ – ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾಗಿವೆ.
38. ಐ, ಔ ಅಕ್ಷರಗಳನ್ನು ಸಂಧ್ಯಾಕ್ಷರಗಳೆಂದು ಕರೆಯುತ್ತಾರೆ.
39. ವ್ಯಂಜನಾಕ್ಷರ – ಸ್ವರಗಳ ಸಹಾಯದಿಂದ ಉಚ್ಚರಿಸ್ಪಡುವ ಅಕ್ಷರಗಳಾಗಿವೆ.
40. ವ್ಯಂಜನಾಕ್ಷರಗಳಲ್ಲಿ ಎರಡು ವಿಧ – ವರ್ಗೀಯ ವ್ಯಂಜನ , ಮತ್ತು ಅವರ್ಗೀಯ ವ್ಯಂಜನ
41. ಅಲ್ಪ ಪ್ರಾಣ ಎಂದರೆ – ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳಾಗಿವೆ ಇವುಗಳ ಸಂಖ್ಯೆ – 10
42. ಅಲ್ಪಪ್ರಾಣ ಅಕ್ಷರಗಳು – ಕ, ಗ,ಚ, ಜ, ಟ, ಡ, ತ, ದ, ಪ, ಬ
43. ಮಹಾಪ್ರಾಣ – ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳೇ ಮಹಾಪ್ರಾಣ ಅಕ್ಷರಗಳು ಇವುಗಳ ಸಂಖ್ಯೆ – 10
44. ಮಹಾಪ್ರಾಣ ಅಕ್ಷರಗಳು – ಖ, ಘ, ಛ, ಝ, ಢ, ಥ, ಧ, ಫ, ಭ
45. ಅನುನಾಸಿಕ ಎಂದರೆ – ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಾಗಿವೆ. 5 ಅಕ್ಷರಗಳು
46. ಅವರ್ಗೀಯ ವ್ಯಂಜನ ಎಂದರೆ – ಅಕ್ಷರೋತ್ಪತ್ತಿ ದೃಷ್ಠಿಯಿಂದ ವರ್ಗ ಮಾಡಲು ಬಾರದ ಅಕ್ಷರಗಳೇ ಅವರ್ಗೀಯ ವ್ಯಂಜನವಾಗಿದೆ.
47. ಅನುನಾಸಿಕ ಅಕ್ಷರಗಳು – ಙ , ಞ ,ಣ, ನ, ಮ
48. ಅವರ್ಗೀಯ ವ್ಯಂಜನಾಕ್ಷರಗಳು – ಯ್.ರ್, ಲ್, ವ್, ಶ್, ಷ್, ಸ್, ಹ್, ಳ್
49. ಯೇಗವಾಹಕ – ಯೋಗ ಎಂದರೆ ಕೂಡಿಕೊಂಡು ಬರುವುದು ಎಂದರ್ಥ
50. ಯೋಗವಾಹಕಗಳಲ್ಲಿ ಎರಡು ವಿಧ – ಅನುಸ್ವರ ಅಥವಾ ಬಿಂದು ಮತ್ತು ವಿಸರ್ಗ
51. ಅಕ್ಷರೋತ್ಪತ್ತಿ ಸ್ಥಾನ – ವರ್ಣಮಾಲೆಗಳು ಬಾಯಿಯಿಂದ ಉದ್ದರಿಸುವಾಗ ನಿರ್ದೀಷ್ಟ ಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತದೆ.
52. ಒತ್ತಕ್ಷರ ( ಸಂಯುಕ್ತಾಕ್ಷರ ) – ಒಂದು ಅಕ್ಷರವನ್ನು ಉಚ್ಚರಿಸುವಾಗ ನಡುವೆ ಸ್ವರವಿಲ್ಲದೆ ಎರಡು – ಮೂರು ವ್ಯಂಜನಾಕ್ಷರಗಳಿದ್ದು .ಅವುಗಳ ಮುಂದೆ ಸ್ವರ ಬಂದರೆ ಅವೇ ಒತ್ತಾಕ್ಷರ .
53. ಸಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಕ್ಷರ ಅದೇ ಜಾತಿಯ ವ್ಯಂಜನಕ್ಷರ ಸೇರಿ ಒತ್ತಿ ಉಚ್ಚರಿಸಿದರೆ ಅದೇ ಸಜಾತಿಯ ಒತ್ತಕ್ಷರ . ಉದಾ- ಅಕ್ಕ, ಅಣ್ಣ, ತಮ್ಮ ಇತ್ಯಾದಿ
54. ವಿಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಾಕ್ಷರಕ್ಕೆ ಬೇರೊಂದು ವ್ಯಂಜನಾಕ್ಷರ ಬಂದು ಅದನ್ನು ಒತ್ತಿ ಉಚ್ಚರಿಸಿದರೆ ಅದೇ ವಿಜಾತಿ ಒತ್ತಕ್ಷರ – ಉದಾ- ಅರ್ಭಟ , ಚಕ್ರ , ತರ್ಲೆ , ತಿಕ್ಲು
55. ವಾಕ್ಯ ಎಂದರೆ – ಪದಗಳ ಕ್ರಮಬದ್ದ ಜೋಡನೆಯೇ ವಾಕ್ಯ
56. ಪದ ಎಂದರೆ – ಅಕ್ಷರಗಳ ಕ್ರಮಬದ್ಧ ಜೋಡನೆಯೇ ಪದ .
57. ನಾಮಪದ ಎಂದರೆ – ಯಾವುದೇ ಒಂದು ವಸ್ತು ಸ್ಥಳ , ಪ್ರಾಣಿ , ಮನುಷ್ಯರ ಹೆಸರುಗಳನ್ನು ಸೂಚಿಸುವುದೇ ನಾಮ ಪದ
58. ನಾಮ ಪದದಲ್ಲಿ ಎರಡು ವಿಧ – ಸಹಜ ನಾಮ ಪದ ಮತ್ತು ಸಾಧಿತ ನಾಮ ಪದ
59. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದ ರೀತಿಯಲ್ಲಿ ಒಟ್ಟು ಸೇರಿದ ಪದವನ್ನೆ ಸಮಾಸ ಎನ್ನುತ್ತಾರೆ.
60. ಸಮಾಸ ರಚನೆಯಲ್ಲಿ ಬರುವ ಮೊದಲನೆಯ ಪದವನ್ನು ಪೂರ್ವಪದವೆಂದೂ ಎರಡನೇ ಪದವನ್ನು ಉತ್ತರ ಪದವೆಂದೂ ಕರೆಯುತ್ತಾರೆ.
61. ಸಮಾಸದಲ್ಲಿ ಪೂರ್ವ ಮತ್ತು ಉತ್ತರ ಪದಗಳೆರಡೂ ಸಂಸ್ಕೃತ ಪದಗಳಾಗಿರಬೇಕು ಅಥವಾ ಎರಡೂ ಕನ್ನಡ ಪದಗಳಾಗಿರಬೇಕು.
62. ಸಮಾಸದಲ್ಲಿ ಒಂದು ಕನ್ನಡ ಪದ ಹಾಗೂ ಒಂದು ಸಂಸ್ಕೃತ ಪದವಾದಾಗ ಅದು ಅರಿ ಸಮಾಸವಾಗುತ್ತದೆ.
63. ಸಮಾಸದಲ್ಲಿ ಒಟ್ಟು ಎಂಟು ವಿಧ.
64. ಸಮಾಸಗಳು ತತ್ಪುರುಷ ಸಮಾಸ, ಕರ್ಮಧಾರೆಯ , ದ್ವಿಗು, ಅಂಶಿ, ದ್ವಂದ್ವ , ಕ್ರಿಯಾ , ಬಹುವ್ರೀಹಿ , ಗಮಕ ಸಮಾಸ
65. ಎರಡು ನಾಮ ಪದಗಳು ಸಮಾಸವಾದಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ . ಅದು ತತ್ಪುರುಷ ಸಮಾಸ .
66. ತತ್ಪುರುಷ ಸಮಾಸಕ್ಕೆ ಉದಾ. ಬೆಟ್ಟದ + ತಾವರೆ = ಬೆಟ್ಟದಾವರೆ.
67. ಸಮಾಸ ರಚನೆಯಲ್ಲಿ ಪೂರ್ವಪದ ಗುಣವಾಚಕವಾಗಿಯೂ ಉತ್ತರ ಪದ ನಾಮಪದವಾಗು ಇದ್ದು ಈ ಎರಡು ಪದ ರಚನೆಗಳ ನಡುವೆ ವಿಶೇಷಣ ಮತ್ತು ವಿಶೇಷ್ಯ ಸಂಬಂಧವಿದ್ದು ಅದ್ದರಿಂದ ಉಂಟಾಗುವ ಸಮಾಸವೇ ಕರ್ಮಧಾರೆಯ ಸಮಾಸ .
68. ಕರ್ಮಧಾರೆಯ ಸಮಾಸಕ್ಕೆ ಉದಾ. ಹಿರಿದು + ಜೇನು = ಹೆಜ್ಜೇನು .
69. ಸಮಾಸ ರಚನೆಯಲ್ಲಿ ಪೂರ್ವ ಪದ ಸಂಖ್ಯಾ ಅವೆರಡೂ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ
70. ದ್ವಿಗು ಸಮಾಸಕ್ಕೆ ಉದಾ. ಮೂರು + ಮಡಿ = ಮುಮ್ಮಡಿ .
71. ಪೂರ್ವೋತ್ತರ ಪದಗಳು ಅಂಶೀಂಶೀ ಭಾವ ಸಂಬಂಧದಿಂದ ಸೇರಿ ಪೂರ್ವ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸ ಎಂದು ಕರೆಯುತ್ತಾರೆ.
72. ಅಂಶಿ ಸಮಾಸಕ್ಕೆ ಉದಾ. ಕೈಯ + ಅಡಿ + ಅಂಗೈ
73. ಸಮಾಸ ರಚನೆಯಲ್ಲಿ ಎರಡು ಅಥವಾ ಹಲವು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥವೂ ಪ್ರಧಾನವಾಗುಳ್ಳ ಸಮಾಸವೇ ದ್ವಂದ್ವ ಸಮಾಸ .
74. ದ್ವಂದ್ವ ಸಮಾಸಕ್ಕೆ ಉದಾ. ಕೆರೆಯೂ + ಬಾವಿಯೂ + ಕೆಟ್ಟೆಯೂ = ಕೆರೆಬಾವಿಕಟ್ಟೆಗಳು .
75. ಸಮಾಸ ರಚನೆಯಲ್ಲಿ ಪೂರ್ವ ಪದ ನಾಮಪದವಾಗಿದ್ದು ಉತ್ತರ ಪದ ಕ್ರಿಯಾಪದವಾಗಿದ್ದು ಅವೆರಡೂ ಸೇರಿ ಆಗುವ ಸಮಾಸವೇ ಕ್ರಿಯಾ ಸಮಾಸ.
76. ಕ್ರಿಯಾ ಸಮಾಸಕ್ಕೆ ಉದಾ. ಕೈಯನ್ನು + ಮುಟ್ಟಿ + ಕೈ ಮುಟ್ಟು.
77. ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾಗುವಾಗ ಬೇರೊಂದು ಪದದ ಅರ್ಥ ಪ್ರಧಾನವಾಗಿದ್ದರೆ . ಅದನ್ನು ಬಹುವ್ರಿಹಿ ಸಮಾಸ ಎನ್ನುವರು.
78. ಬಹುವ್ರಿಹಿ ಸಮಾಸಕ್ಕೆ ಉದಾ. ಮೂರು + ಕಣ್ಣುಉಳ್ಳವ = ಮುಕ್ಕಣ್ಣ – ( ಶಿವ ).
79. ಪೂರ್ವ ಪದವು ಸರ್ವನಾಮ ಅಥವಾ ಕೃದಂತವಾಗಿದ್ದು ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವೇ ಗಮಕ ಸಮಾಸ .
80. ಗಮಕ ಸಮಾಸಕ್ಕೆ ಉದಾ. ಇವನು + ಗಂಡಸು = ಈ ಗಂಡಸು .
81. ಕಾವ್ಯದ ಸೌಂದರ್ಯವನ್ನು ಉಂಟುಮಾಡುವ ಶಬ್ದ ಮತ್ತು ಅರ್ಥ ಚಮತ್ಕಾರಕ್ಕೆ ಅಲಂಕಾರ ಎನ್ನುವರು.
82. ಶಬ್ದ / ಅಕ್ಷರಗಳ ಜೋಡನೆಯ ಚಮತ್ಕಾರದಿಂದ ಕಾವ್ಯ ಅಥವ ಮಾತಿನ ಸೌಂದರ್ಯ ಹೆಚ್ಚಿದ್ದರೆ ಅದೇ ಶಬ್ದಾಲಂಕಾರ
83. ಪದಗಳ ಅರ್ಥ ಚಮತ್ಕಾರದಿಂದ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿಸಿದರೆ ಅದನ್ನು ಅರ್ಥಾಲಂಕಾರ ಎಂದು ಕರೆಯುವರು .
84. ವಾಕ್ಯದಲ್ಲಿ ಕವಿ ಯಾವ ವಸ್ತುವನ್ನು ವರ್ಣಿಸುತ್ತಾನೋ ಅದೇ ವರ್ಣ್ಯ ಅಥವಾ ಉಪಮೇಯ
85. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಅಥವಾ ಮಾನವನ್ನಾಗಿ ಇಟ್ಟುಕೊಂಡು ವರ್ಣಿಸಲಾಗಿದೆಯೋ ಆ ವಸ್ತುವೇ ಅವರ್ಣ್ಯ ಅಥವ ಉಪಮಾನ.
86. ಉಪಮಾ ಎಂದರೆ ಹೋಲಿಕೆ ಎಂದರ್ಥ ಉಪಮೇಯ ಉಪಮಾನಗಳೊಳಗೆ ಉಪಮಾನ ( ಹೋಲಿಕೆ ) ಇರುವ ಅಲಂಕಾರವೇ ಉಪಮಾಲಂಕಾರ .
87. ಲೋಪವೆಂದರೇ , ಅಕ್ಷರ ಬಿಟ್ಟು ಹೋಗುವುದು.
88. ಆಗಮವೆಂದರೆ , ರುವ ಅಕ್ಷರಗಳ ಜೊತೆಗೆ ಹೊಸದೊಂದು ಅಕ್ಷರ ಬರುವುದು.
89. ಆದೇಶವೆಂದರೆ ಇರುವ ಅಕ್ಷರಗಳನ್ನು ಕೆಡಿಸಿ, ಆ ಜಾಗದಲ್ಲಿ ಹೊಸದೊಂದು ಕ್ಷರ ಬರುವುದು.
90. ಸಂಧಿಕಾರ್ಯ ಯಾವಾಗಲೂ ಪೂರ್ವಪದದ ಅಂತ್ಯದ ಅಕ್ಷರ ಮತ್ತು ತ್ತರ ಪದದ ಅಕ್ಷರಗಳ ನಡುವೆ ನಡೆದ ( ಲೋಪ , ಆಗಮ , ಆದೇಶ ಕಾರ್ಯಗಳಾಗುತ್ತವೆ,).
91. ಕನ್ನಡದ ಮೊದಲ ಮಕ್ಕಳ ಪತ್ರಿಕೆ – ಮಕ್ಕಳ ಪುಸ್ತಕ
92. ಕನ್ನಡದ ಮೊದಲ ಮಹಿಳಾ ಪತ್ರಿಕೆ – ಕರ್ನಾಟಕ ನಂದಿನಿ
93. ಕನ್ನಡದ ಮೊದಲ ವಾರಪತ್ರಿಕೆ – ವಾಗ್ಬೂಷಣ
94. ಕನ್ನಡದ ಮೊದಲ ಶಿಕ್ಷಣ ಪತ್ರಿಕೆ – ಕನ್ನಡ ಜ್ಞಾನ ಬೋಧಕ
95. ನಾಟಕ ಸೇವೆಗಾಗಿ ಮ್ಯಾಗ್ಸೇಸ್ ಪಡೆದ ಮೊದಲ ಕನ್ನಡಿಗ – ಕೆ.ವಿ.ಸುಬ್ಬಣ್ಣ.
96. ಮೊದಲ ಬಾರಿಗೆ ಲಕ್ಷ ಪ್ರತಿ ಮಾರಾಟಗೊಂಡ ದಿನ ಪತ್ರಿಕೆ – ಕೊರವಂಜಿ
97. ಹೊಸಗನ್ನಡದ ಸಾಹಿತ್ಯದ ಮೊದಲ ಪ್ರೇಮಗೀತೆ ಸಂಕಲನ ಬರೆದವರು – ತೀ.ನಂ.ಶ್ರೀ ( ಚಿಲುಮೆ ).
98. ಕನ್ನಡದ ಮೊದಲ ಸ್ನಾತಕೋತ್ತರ ಪದವಿಧರ ಆರ್.ನರಸಿಂಹಾಚಾರ್
99. ಕೇಂದ್ರ ಸಾಹಿತ್ಯ ಅಕಾಡೆಮಿಗೆ ಮೊದಲ ಚುನಾಯಿತ ಅಧ್ಯಕ್ಷರಾದವರು – ಯು.ಆರ್.ಅನಂತಮೂರ್ತಿ
100.ಪ್ರಥಮ ಜ್ಞಾನಪೀಠ ಪ್ರಶಸ್ತಿ ವಿಜೇತ – ಕುವೆಂಪು
101.ಗೊಬ್ಬರದ ಮೇಲೆ ಕವನ ಬರೆದ ಮೊದಲಿಗೆ – ಕುವೆಂಪು
102.ಅಕಾಶವಾಣಿಯಿಂದ ಮಾತನಾಡಿದ ಮೊದಲ ಕನ್ನಡಿಗ – ಕುವೆಂಪು
103.ಆಧುನಿಕ ಕನ್ನಡದ ಪ್ರಥಮ ಮಹಾಕಾವ್ಯ ಬರೆದವರು- ಕುವೆಂಪು
104.ಕರ್ನಾಟಕ ಪ್ರಥಮ ಸಂಚಾರಿ ಗ್ರಂಥಾಲಯ – ಕುವೆಂಪು ಗ್ರಂಥಾಲಯ
105.ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕುವೆಂಪು
106.ಪ್ರಥಮ ರಾಷ್ಟ್ರಕವಿ ಬಿರುದು ಪಡೆದ ಕನ್ನಡಿಗ – ಗೋವಿಂದ ಪೈ ( ಮದ್ರಾಸ್ ಸರ್ಕಾರ ).
107.ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಎಂ.ಗೋಪಾಲ ಕೃಷ್ಣ ಅಡಿಗ
108.ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಥಮ ಕನ್ನಡ ಗಾಯಕ – ಶಿವಮೊಗ್ಗ ಸುಬ್ಬಣ್ಣ.
109.ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ವಿ.ವಿ. – ಮೈಸೂರು
110.ನವೋದಯ ಕಾಲದ ಮೊದಲ ಕವಯಿತ್ರಿ – ಬೆಳೆಗೆರೆ ಜಾನಕಮ್ಮ
111.ಕನ್ನಡದ ಮೊದಲ ಪತ್ರಕರ್ತೆ – ಆರ್.ಕಲ್ಯಾಣಮ್ಮ
112.ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ –ಹೆಚ್. ವಿ. ನಂಜುಂಡಯ್ಯ
113.ಮೊದಲ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದವರು – ಡಾ.ರಾಜ್ ಕುಮಾರ್
114.ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು – ಸರ್.ಎಂ.ವಿಶ್ವೇಶ್ವರಯ್ಯ
115.ಕನ್ನಡದ ಮೊದಲ ವೈದ್ಯ ಪದಕೋಶ ನಿಘಂಟು ಬರೆದವರು – ಡಾ.ಡಿ.ಎಸ್.ಶಿವಪ್ಪ
116.ಕೇಂದ್ರ ಸರ್ಕಾರದ ಎಮರೈಟೀಸ್ ಫೆಲೋಶಿಫ್ ಪಡೆದ ಮೊದಲ ಲೇಖಕಿ – ಶ್ರೀಮತಿ ಸುಲೋಚನ ದೇವಿ ಆರಾಧ್ಯ
117.ಪುಸ್ತಕ ಪ್ರಕಾಸಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಜಿ.ಬಿ.ಜೋಶಿ.
118.ಕನ್ನಡ ಅಕ್ಷರಗಳ ಅಚ್ಚಿನ ಮಾಳೆಗಲ ಮೊದಲ ವಿನ್ಯಾಸಕರ ಕನ್ನಡಿಗ – ಅತ್ತಾವರ ಅನಂತಚಾರಿ
119.ಮೊದಲ ಬೆರಳಚ್ಚು ಲಿಪಿಯಂತ್ರವನ್ನು ಸಿದ್ಧಪಡಿಸಿದ ಕನ್ನಡಿಗ – ಅನಂತ ಸುಬ್ಬಾರಾವ್ .
120.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ನಾಟಕ – ಚಂದ್ರಶೇಖರ್ ಕಂಬಾರರ ಸಿರಿ ಸಂಪಿಗೆ .
121.ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಡಾ.ರಾಜ್ ಕುಮಾರ್
122.ಮ್ಯಾಗ್ಸೆಸೆ ಪಡೆದ ಮೊದಲ ಕನ್ನಡಿಗ – ಕೆ.ವಿ.ಸುಬ್ಬಣ್ಣ.
123.ಸ್ವರ್ಣ ಕಮಲ ಪಡೆದ ಮೊದಲ ಕನ್ನಡದ ಚಿತ್ರ – ಸಂಸ್ಕಾರ
124.ಕರ್ನಾಟಕದಲ್ಲಿ ಜಾನಪದ ಕಲೆಗಾಗಿ ದುಡಿದ ಮೊದಲ ವಿದೇಶಿಗ – ಲೆ.ಕ.ಮಕಂಜಿ
125.ಸಂಯುಕ್ತ ಕರ್ನಾಟಕ , ಕಸ್ತೂರಿ , ಕರ್ಮವೀರ ಪತ್ರಿಕೆ ಪ್ರಾರಂಭಿಸಿದವರು – ಆರ್.ಆರ್.ದಿವಾಕರ
126.ಮೊದಲ ಬಾರಿಗೆ ಅಮೇರಿಕಾದ ಛಾಯಚಿತ್ರ ಸೊಸೈಟಿಯ ಗೌರವ ಫೆಲೋಷಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸಿ.ರಾಜಗೋಪಾಲ್
127.ಜಮನಾಲಾಲ್ ಬಜಾಜ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ತಗಡೂರು ರಾಮಚಂದ್ರರಾವ್
128.ಕನ್ನಡ ಪುರಂದರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ತಿಟ್ಟೆ ಕೃಷ್ಣಯ್ಯಂಗಾರ್ .
129.ಮಣ್ಣಿನ ಶಿಲ್ಪ ( ಟೆರ್ರಾಕೂಟ) ಪ್ರಚಾರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ಕಲಾವಿದೆ – ಎನ್.ಪುಷ್ಪಮಾಲ
130.ಕನ್ನಡ ಕಾದಂಬರಿ ಆಧಾರಿತ ಪ್ರಥಮ ಚಿತ್ರ – ಕೃಷ್ಣಮೂರ್ತಿ ಪುರಾಣಿಕ ಧರ್ಮದೇವತೆ ಕಾದಂಬರಿ ಆಧಾರಿಸಿ ಕರುಣೆಯೇ ಕುಟುಂಬದ ಕಣ್ಣು .
131.ಕಮಲಾದೇವಿ ಚಟೋಪಾಧ್ಯಾಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಗಿರೀಶ್ ಕರ್ನಾಡ್ .
132.ಕರ್ನಾಟಕದ ಮೊದಲ ವಿಶ್ವವಿದ್ಯಾಲಯ – ಮೈಸೂರು ವಿಶ್ವ ವಿದ್ಯಾಲಯ ( 1916 ).
133.ಕನ್ನಡ ವಿಶ್ವ ವಿದ್ಯಾಲಯದ ( ಹಂಪಿ ) ಮೊದಲ ಉಪಕುಲಪತಿ – ಚಂದ್ರಶೇಖರ್ ಕಂಬಾರ
134.ಸ್ವೀಡನ್ ದೇಶದ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ – ಡಾ.ಸುದರ್ಶನ.
135.ಕರ್ನಾಟಕದಲ್ಲಿ ಮೊದಲ ಬಾರಿಗೆ ಕನ್ನಡ ಶಾಲೆ ಪ್ರಾರಂಭಿಸಿದವರು – ರೈಸ್.
136.ಅಂಕಣ ಬರಹಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಡಾ.ಹಾ.ಮಾ.ನಾಯಕ್
137.ಪ್ರಸ್ತುತ ಕನ್ನಡದ ರಾಷ್ಟ್ರಕವಿ – ಜಿ.ಎಸ್.ಶಿವರುದ್ರಪ್ಪ.
138.
ಕನ್ನಡ ಸಂಧಿಗಳು
ಸಂಧಿಗಳು
ಪೂರ್ವಪದ
ಉತ್ತರ ಪದ ( ಪರವಾಗುವ ಅಕ್ಷರ )
ಆದೇಶವಾಗುವ ಅಕ್ಷರ / ಲೋಪ/ ಆಗಮವಾಗುವ ಅಕ್ಷರ
ಸಂಧಿಪದ
ಸಂಧಿಕಾರ್ಯ / ನಿಯಮ
ಲೋಪಸಂಧಿ
ಸ್ವರ +
ರ್ + ಉ +
ಉದಾ- ಊರು +
ಸ್ವರ
ಅ
ಅಲ್ಲಿ
ಪೂರ್ವ ಪದದ ಕೊನೆಯ ಸ್ವರ ಲೋಪ ( ಉ ಸ್ವರ ಲೋಪವಾಗಿದೆ.)
ಊರಲ್ಲಿ
ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಪೂರ್ವ ಕೊನೆಯಲ್ಲರುವ ಸ್ವರ ಲೋಪವಾಗುವುದಕ್ಕೆ ಲೋಪಸಂಧಿ ಎನ್ನುವರು
ಆಗಮ ಸಂಧಿ
ಸ್ವರ +
ನ್ + ಎ
ಉದಾ – ಮನೆ +
ಸ್ವರ
ಅ
ಅಲ್ಲಿ
ಸ್ವರಗಳನ್ನು ಕೆಡಿಸದೆ ಯ್ / ವ್ ಆಗಮವಾಗುತ್ತದೆ. ಯ್ ಆಗಮವಾಗಿದೆ.
ಮನೆಯಲ್ಲಿ
ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಇರುವ ಎರಡು ಸ್ವರ ಕೆಡಿಸದೆ ಹೊಸದಾಗಿ ಯ್ ಅಥವಾ ವ್ ಆಗಮವಾಗುವುದಕ್ಕೆ ಆಗಮ ಸಂಧಿ ಎನ್ನುವರು.
ಯ ಕಾರಗಾಮ ಸಂಧಿ
ಆ,ಇ,ಈ,ಎ,ಐ +
(ಸ್ವರಗಳು)
ಉದಾ – ಮನೆ +
ನ್ + ಎ +
ಸ್ವರ
ಅನ್ನು
ಅ
ಯ್ ಆಗಮ ( ಎ ಅ ಸ್ವರಗಳನ್ನು ಕೆಡಿಸದೆ ಯ್ ಆಗಮವಾಗಿದೆ. )
ಮನೆಯನ್ನು
ಇರುವ ಎರಡು ಸ್ವರಗಳನ್ನು ಕೆಡಿಸದೆ ಹೊಸದಾಗಿ ಆಗಮವಾಗುವುದಕ್ಕೆ , ಯ ಕಾರಾಗಮ ಸಂಧಿ ಎನ್ನುವರು.
ವ ಕಾರಗಾಮ ಸಂಧಿ
ಉ, ಊ,ಋ,ಓ( ಸ್ವರಗಳು )
ಗುರು +
ರ್ + ಉ +
ಸ್ವರ
ಅನ್ನು
ಅ
ವ್ ಕಾರ ಆಗಮ ಉ ಮತ್ತು ಅ ಸ್ವರಗಳನ್ನು ಕೆಡಿಸದೆ ಹೊಸದಾಗಿ ವ್ ಆಗಮವಾಗಿದೆ.
ಗುರುವನ್ನು
ಇರುವ ಎರಡು ಸ್ವರಗಳನ್ನು ಕೆಡಿಸದೆ ಹೊಸದಾಗಿ ವ್ ಆಗಮವಾಗುವುದೆ ವ್ ಕಾರಾಗಮ ಸಂಧಿ ಎನ್ನುವರು.
ಆದೇಶ ಸಂಧಿ
ಸ್ವರ ಅಥವಾ ವ್ಯಂಜನ
ಕ್
ತ್
ಪ್
ಕಾಲ
ಗ್
ವ್
ಬ್
ಗಳಿಗೆ ಆದೇಶವಾಗಿ ಬರುವುದಾಗಿದೆ.
ಮಳೆಗಾಲ
ಪೂರ್ವ ಪದದಲ್ಲಿ ಸ್ವರ ಅತವಾ ವ್ಯಂಜನವಿದ್ದು ಉತ್ತರ ಪದದ ಆದಿಯಲ್ಲಿರುವ ಕ , ತ್, ಪ್ ಗಳನ್ನು ಕೆಡಿಸಿ ಕ್ರಮವಾಗಿ ಗ್,ದ್,ಬ್ ಆದೇಶವಾಗುವುದಕ್ಕೆ ಆದೇಶ ಸಂಧಿ ಎನ್ನವರು.
ಸಂಸ್ಕೃತ ಸ್ವರ ಸಂಧಿಗಳು
ಸವರ್ಣದೀರ್ಘ ಸಂಧಿ
ಅ ( ಆ )
ಇ ( ಈ )
ಉ ( ಊ )
ವಿದ್ಯಾ
ರವಿ
ಗುರು
ಅ ( ಆ )
ಇ ( ಈ )
ಉ ( ಊ )
ಅಭ್ಯಾಸ
ಇಂದ್ರ
ಉಪದೇಶ
ಆ
ಈ
ಊ
-
-
-
ವಿದ್ಯಾಭ್ಯಾಸ
ರವೀಂದ್ರ
ಗುರೂಪದೇಶ
ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದು ಸಂಧಿಯಾಗುವಾಗ ಅದೇ ಸವರ್ಣ ಸ್ವರದ ದೀರ್ಘಾಕ್ಷರವು ಆದೇಶವಾಗುವುದಕ್ಕೆ ಸವರ್ಣದೀರ್ಘ ಸಂಧಿ ಎನ್ನುವರು. ಆ ಮತ್ತು ಅ ಸವರ್ಣ ಸ್ವರಗಳು ಪರವಾಗಿ ಅದೇ ಸ್ವರದ ದೀರ್ಘಾಕ್ಷರ ಆ ಆದೇಶವಾಗಿದೆ.
ಉ ಮತ್ತು ಉ ಸ್ವರಗಳು ಪರವಾಗಿ ಊ ದೀರ್ಘಾಕ್ಷರ ಆದೇಶವಾಗಿದೆ.
ಗುಣ ಸಂಧಿ
ಅ ಆ
ಅ ಆ
ಅ ಆ
ರಾಜ +
ಚಂದ್ರ +
ರಾಜ +
ಇ ಈ
ಉ ಊ
ಋ
ಇಂದ್ರ
ಉದಯ
ಋಷಿ
ಏ
ಓ
ಅರ್
-
-
-
ರಾಜೇಂದ್ರ
ಚಂದ್ರೋದಯ
ರಾಜರ್ಷಿ
ಪೂರ್ವ ಪದದಲ್ಲಿನ ಅಆ ಕಾರಗಳಿಗೆ
ಇಈ ಕಾರಗಳು ಪರವಾದಾಗ ಏ
ಉಊ ಕಾರಗಳು ಪರವಾದಾಗ ಓ
ಋ ಕಾರ ಪರವಾದಾಗ ಅರ್ ಆದೇಶವಾಗುವುದಕ್ಕೆ ಗುಣಸಂಧಿ ಎನ್ನುವರು.
( ಅ ಮತ್ತು ಇ ಕೆಡಿಸಿ ಏ ಕಾರ ಆದೇಶವಗಾದಿ.)
( ಅ ಮತ್ತು ಉ ಕೆಡಿಸಿ ಓ ಕಾರ ಆದೇಶವಾಗಿ.)
( ಅ ಮತ್ತು ಋ ಕೆಡಿಸಿ ಅರ್ ಕಾರ ಆದೇಶವಾಗಿದೆ.)
ವೃದ್ಧಿ ಸಂಧಿ
ಅಆ
ಅಆ
ರಾಷ್ಟ್ರ
ಗಂಗಾ
ಏಐ
ಓಔ
ಐಕ್ಯ
ಓಘ
ಐ
ಔ
ಐಔ
ರಾಷ್ಟ್ರಕ್ಯ
ಗಂಗೌಘ
ಪೂರ್ವ ಪದದಲ್ಲಿರುವ ಆ ಅ ಕಾರಗಳಿಗೆ ಏ ಐ ಕಾರಗಳು ಪರವಾದಾಗ ಐ ಕಾರವು ಓಔ ಕಾರಗಳು ಪರವಾದಾಗ ಔ ಕಾರವು ಆದೇಶವಾಗಿ ಬರುವುದಕ್ಕೆ ವೃದ್ಧಿ ಸಂಧಿ ಎನ್ನುವರು.
( ಅ ಕಾರಕ್ಕೆ ಐ ಕಾರ ಪರವಾಗಿ ಐ ಕಾರವೇ ಆದೇಶವಾಗಿದೆ.)
ಆ ಕಾರಕ್ಕೆ ಔ ಪರವಾಗಿ ಆದೇಶ
ಯಣ್ ಸಂಧಿ
ಇಈ
ಉಊ
ಋ
ಅತಿ
ವಧು
ಪಿತೃ
ಸವರ್ಣವಲ್ಲದ ಸ್ವರಗಳು ಬಂದಾಗ
ಅಂತ
ಆಗಮನ
ಅರ್ಜಿತ
ಯ್
ವ್
ರ್
ಯ್
ವ್
ರ್ ಆದೇಶವಾಗಿದೆ
ಅತ್ಯಂತ
ವಧ್ವಾಗಮನ
ಪಿತ್ರಾರ್ಜಿತ
ಪೂರ್ವಪದದಲ್ಲಿರುವ ಇಈ, ಉಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರಗಳು ಪರವಾದಾಗ ಇಈ ಕಾರಗಳಿಗೆ – ಯ್
ಉಊ ಕಾರಗಳಿಗೆ – ವ್ ಗಳು
ಋ ಕಾರಕ್ಕೆ ರ್ ಆದೇಶವಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು .
ಸಂಸ್ಕೃತ ವ್ಯಂಜನ ಸಂಧಿಗಳು
ಜಸ್ತ್ವ ಸಂಧಿ
ಕ,ಚ್,ಟ್,ತ್,ಪ್
ವಾಕ್
ಅಚ್
ಷಟ್
ಸತ್
ಅಪ್
ಸ್ವರ ಅಥವಾ ವ್ಯಂಜನ
ಈಶ
ಅಂತ
ಆನನ
ಆನಂದ
ದಿ
ವಗೀಶ
ಅಜಂತ
ಶಡಾನನ
ಸದಾನಂದ
ಅಬ್ದಿ
ಕ್ರಮವಾಗಿ ಗ್,ಜ್,ಡ್,ದ್,ಬ್ ಆದೇಶವಾಗಿದೆ.
ಕ್ ಗೆ ಗ್
ಚ್ ಗೆ ಜ್
ಟ್ ಗೆ ಡ್
ತ ಗೆ ದ್
ಪ ಗೆ ಬ್
ಪೂರ್ವ ಪದದ ಅಂತ್ಯದಲ್ಲಿರುವ ವರ್ಗೀಯ ವ್ಯಂಜನದ ಪ್ರಥಮಾಕ್ಷರಗಳು ಕೆಡಿಸಿ ಅದೇ ವರ್ಗದ ತೃತಿಯಾಕ್ಷರಗಳು ಆದೇಶವಾಗುವುದಕ್ಕೆ ಜಸ್ತ್ವಸಂಧಿ ಎನ್ನುವರು.
ಉದಾ - ವರ್ಗೀಯ ವ್ಯಂಜನದ ಪ್ರಥಮಾಕ್ಷರಗಳಾದ ಕ ,ಚ್,ಟ್,ತ್,ಪ್ ಗಳನ್ನು ಕೆಡಿಸಿ ಕ್ರಮವಾಗಿ ಗ್,ಜ್,ಡ್,ದ್,ಬ್ ಗಳು ಆದೇಶವಾಗಿ ಬಂದಿದೆ.
ಅನುನಾಸಿಕ ಸಂಧಿ
ಯಾವುದಾದರೂ ಅನುನಾಸಿಕ
ಮಯ
ಮುಖ
ಮಾನ
ವಾಙ್ಮಯ ಕ್ ಗೆ ಙ
ಷಣ್ಮುಖ ಟ್ ಗೆ ಣ್
ಸನ್ಮಾನ ತ್ ಗೆ ನ್
ವರ್ಗೀಯ ವ್ಯಂಜನದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರ ಪರವಾದರೂ ಪ್ರಥಮಾಕ್ಷರದ ಅನುನಾಸಿಕವೇ ಆದೇಶವಾಗುವುದಕ್ಕೆ ಅನುನಾಸಿಕ ಸಂಧಿ ಎನ್ನುವರು.
ಉದಾ – ಕ್,ಟ್,ತ್, ಪ್ರಥಮಾಕ್ಷರಗಳಿಗೆ ಅನುನಾಸಿಕ ಅಶ್ರರ ಪರವಾಗಿ ಕ್ರಮವಾಗಿ ಙ,ಣ್,ನ್ ಗಳು ಆದೇಶವಾಗಿದೆ
ಶ್ಚುತ್ವ ಸಂಧಿ
ಸ ಕಾರ
ತ ಕಾರ
ಮನಸ್
ಸತ್
ಸತ್
ಶ ಕಾರ
ಚ ಕಾರ
(ಚ,ಛ,ಜ )
ಶಾಂತಿ
ಚಿತ್ರ
ಜನ
ಸ ಕಾರಕ್ಕೆ ಶ್
ತ್ ಕಾರಕ್ಕೆ ಚ್
ತ್ ಕಾರಕ್ಕೆ ಜ್
ಮನಶ್ಯಾಂತಿ
ಸಚ್ಚಿತ್ರ
ಸಜ್ಜನ
ಪೂರ್ವಪದದಲ್ಲಿ ಸ ಕಾರ ಲ್ಲವೇ ತ ಕಾರವಿದ್ದು ಅವುಗಳಿಗೆ ಶ ಕಾರ ಇಲ್ಲವೆ ಚ ವರ್ಗಾಕ್ಷರಗಳು ಪರವಾದಾಗ ಸ ಕಾರಕ್ಕೆ ಶ ಕಾರವು ತ ಕಾರಕ್ಕೆ ವರ್ಗಾಕ್ಷರಗಳು ಆದೇಶವಾಗುವುದಕ್ಕೆ ಶ್ಚುತ್ವ ಸಂಧಿ ಎನ್ನುವರು
ಪ್ಟುತ್ವ ಸಂಧಿ
ಸ ಕಾರ
ತ ಕಾರ
ಧನುಸ್
ತತ್
ಷ ಕಾರ
ಟ ಕಾರ
ಟಂಕಾರ
ಟೀಕಾ
ಸ ಕಾರಕ್ಕೆ ಷ ಕಾರ
ತ ಕಾರಕ್ಕೆ ಟ ಕಾರ
ಧನುಷ್ಟಾಂಕಾರ
ತಟ್ಟಿಕಾ
ಪೂರ್ವಪದದಲ್ಲಿನ ಸ ಕಾರ ಇಲ್ಲವೇ ತ್ ಕಾರಗಳಿಗೆ ಷ ಕಾರ ಇಲ್ಲವೆ ಟ ಕಾರ ಪರವಾದಾಗ
ಸ ಕಾರಕ್ಕೆ ಟ ಕಾರ ಆದೇಶ
ತ ಕಾರಕ್ಕೆ ಟ ಕಾರ ಆದೇಶ
ಪ್ರಸ್ತುತ ಉದಾ ಸ ಕಾರಕ್ಕೆ ಷ ಕಾರವು ತ್ ಕಾರಕ್ಕೆ ಟ ಕಾರವು ಆದೇಶವಾಗಿ ಬಂದಿದೆ.
ಛತ್ವ ಸಂಧಿ
ವರ್ಗೀಯ ವ್ಯಂಜನ
1
ಉತ್
ವಿದ್ಯುತ್
ಯ್,ರ್,ಲ್,ವ್, ಶ ಕಾರಗಳು ಪರವಾಗುತ್ತವೆ.
ಶ್ವಾಸ
ಶಕ್ತಿ
ಉಚ್ಛಾಸ
ವಿದ್ಯುಚ್ಛಕ್ತಿ
ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳನ್ನು ಕೆಡಿಸಿ ಛ ಕಾರ ಆದೇಶ ( ವರ್ಗೀಯ ಅವರ್ಗೀಯ ವ್ಯಂಜನಗಳ ತ್ ಮತ್ತು ಶ್ )
ಪೂರ್ವಪದದಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳಾದ ಯ್ , ರ್,,ಲ್,ವ್, ಶ್, ಗಳು ಪರವಾದಾಗ ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳನ್ನು ಕೆಡಿಸಿ ಛ ಕಾರ ಆದೇಶವಾಗುವುದಕ್ಕೆ ಛತ್ವ ಸಂಧಿ ಎನ್ನುವರು.
ವಿಸರ್ಗ ಸಂಧಿ
ರೇಪ ( ರ )
ಸ ಕಾರ
ಅಂತರ್
ಅಂತರ್
ಕ,ಖ
ಪ ಫ
ಕರಣ
ಪುರ
ಅಂತಃಕರಣ
ಅಂತಃಪುರ
ರೇಫ ಮತ್ತು ಸ ಕಾರಗಳನ್ನು ಕೆಡಿಸಿ ವಿಸರ್ಗಾದೇಶವಾಗುತ್ತದೆ.
ಪೂರ್ವಪದದಲ್ಲಿ ರೇಫ ಇಲ್ಲವೇ ಸಕಾರವಿದ್ದು ಅವುಗಳಿಗೆ ಕ,ಖ,ಪ,ಫ ಅಕ್ಷರಗಳು ಪರವಾದಾಗ ರೇಷೆ ಮತ್ತು ಸ ಕಾರಗಳನ್ನು ಕೆಡಿಸಿ ವಿಸರ್ಗ ಆದೇಶವಾಗುವುದಕ್ಕೆ ವಿಸರ್ಗ ಸಂಧಿ ಎನ್ನುವರು.