ಗುರುವಾರ, ನವೆಂಬರ್ 10, 2011

ಕನ್ನಡ ವ್ಯಾಕರಣ

1. ಅಕ್ಷರೋತ್ಪತ್ತಿ ಸ್ಥಾನ – ವರ್ಣಮಾಲೆಗಳು ಬಾಯಿಯಿಂದ ಉದ್ದರಿಸುವಾಗ ನಿರ್ದೀಷ್ಟ ಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತದೆ.
2. ಒತ್ತಕ್ಷರ ( ಸಂಯುಕ್ತಾಕ್ಷರ ) – ಒಂದು ಅಕ್ಷರವನ್ನು ಉಚ್ಚರಿಸುವಾಗ ನಡುವೆ ಸ್ವರವಿಲ್ಲದೆ ಎರಡು – ಮೂರು ವ್ಯಂಜನಾಕ್ಷರಗಳಿದ್ದು .ಅವುಗಳ ಮುಂದೆ ಸ್ವರ ಬಂದರೆ ಅವೇ ಒತ್ತಾಕ್ಷರ .
3. ಸಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಕ್ಷರ ಅದೇ ಜಾತಿಯ ವ್ಯಂಜನಕ್ಷರ ಸೇರಿ ಒತ್ತಿ ಉಚ್ಚರಿಸಿದರೆ ಅದೇ ಸಜಾತಿಯ ಒತ್ತಕ್ಷರ . ಉದಾ- ಅಕ್ಕ, ಅಣ್ಣ, ತಮ್ಮ ಇತ್ಯಾದಿ
4. ವಿಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಾಕ್ಷರಕ್ಕೆ ಬೇರೊಂದು ವ್ಯಂಜನಾಕ್ಷರ ಬಂದು ಅದನ್ನು ಒತ್ತಿ ಉಚ್ಚರಿಸಿದರೆ ಅದೇ ವಿಜಾತಿ ಒತ್ತಕ್ಷರ – ಉದಾ- ಅರ್ಭಟ , ಚಕ್ರ , ತರ್ಲೆ , ತಿಕ್ಲು
5. ವಾಕ್ಯ ಎಂದರೆ – ಪದಗಳ ಕ್ರಮಬದ್ದ ಜೋಡನೆಯೇ ವಾಕ್ಯ
6. ಪದ ಎಂದರೆ – ಅಕ್ಷರಗಳ ಕ್ರಮಬದ್ಧ ಜೋಡನೆಯೇ ಪದ .
7. ನಾಮಪದ ಎಂದರೆ – ಯಾವುದೇ ಒಂದು ವಸ್ತು ಸ್ಥಳ , ಪ್ರಾಣಿ , ಮನುಷ್ಯರ ಹೆಸರುಗಳನ್ನು ಸೂಚಿಸುವುದೇ ನಾಮ ಪದ
8. ನಾಮ ಪದದಲ್ಲಿ ಎರಡು ವಿಧ – ಸಹಜ ನಾಮ ಪದ ಮತ್ತು ಸಾಧಿತ ನಾಮ ಪದ
9. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದ ರೀತಿಯಲ್ಲಿ ಒಟ್ಟು ಸೇರಿದ ಪದವನ್ನೆ ಸಮಾಸ ಎನ್ನುತ್ತಾರೆ.
10. ಸಮಾಸ ರಚನೆಯಲ್ಲಿ ಬರುವ ಮೊದಲನೆಯ ಪದವನ್ನು ಪೂರ್ವಪದವೆಂದೂ ಎರಡನೇ ಪದವನ್ನು ಉತ್ತರ ಪದವೆಂದೂ ಕರೆಯುತ್ತಾರೆ.
11. ಸಮಾಸದಲ್ಲಿ ಪೂರ್ವ ಮತ್ತು ಉತ್ತರ ಪದಗಳೆರಡೂ ಸಂಸ್ಕೃತ ಪದಗಳಾಗಿರಬೇಕು ಅಥವಾ ಎರಡೂ ಕನ್ನಡ ಪದಗಳಾಗಿರಬೇಕು.
12. ಸಮಾಸದಲ್ಲಿ ಒಂದು ಕನ್ನಡ ಪದ ಹಾಗೂ ಒಂದು ಸಂಸ್ಕೃತ ಪದವಾದಾಗ ಅದು ಅರಿ ಸಮಾಸವಾಗುತ್ತದೆ.
13. ಸಮಾಸದಲ್ಲಿ ಒಟ್ಟು ಎಂಟು ವಿಧ.
14. ಸಮಾಸಗಳು ತತ್ಪುರುಷ ಸಮಾಸ, ಕರ್ಮಧಾರೆಯ , ದ್ವಿಗು, ಅಂಶಿ, ದ್ವಂದ್ವ , ಕ್ರಿಯಾ , ಬಹುವ್ರೀಹಿ , ಗಮಕ ಸಮಾಸ
15. ಎರಡು ನಾಮ ಪದಗಳು ಸಮಾಸವಾದಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ . ಅದು ತತ್ಪುರುಷ ಸಮಾಸ .
16. ತತ್ಪುರುಷ ಸಮಾಸಕ್ಕೆ ಉದಾ. ಬೆಟ್ಟದ + ತಾವರೆ = ಬೆಟ್ಟದಾವರೆ.
17. ಸಮಾಸ ರಚನೆಯಲ್ಲಿ ಪೂರ್ವಪದ ಗುಣವಾಚಕವಾಗಿಯೂ ಉತ್ತರ ಪದ ನಾಮಪದವಾಗು ಇದ್ದು ಈ ಎರಡು ಪದ ರಚನೆಗಳ ನಡುವೆ ವಿಶೇಷಣ ಮತ್ತು ವಿಶೇಷ್ಯ ಸಂಬಂಧವಿದ್ದು ಅದ್ದರಿಂದ ಉಂಟಾಗುವ ಸಮಾಸವೇ ಕರ್ಮಧಾರೆಯ ಸಮಾಸ .
18. ಕರ್ಮಧಾರೆಯ ಸಮಾಸಕ್ಕೆ ಉದಾ. ಹಿರಿದು + ಜೇನು = ಹೆಜ್ಜೇನು .
19. ಸಮಾಸ ರಚನೆಯಲ್ಲಿ ಪೂರ್ವ ಪದ ಸಂಖ್ಯಾ ಅವೆರಡೂ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ
20. ದ್ವಿಗು ಸಮಾಸಕ್ಕೆ ಉದಾ. ಮೂರು + ಮಡಿ = ಮುಮ್ಮಡಿ .
21. ಪೂರ್ವೋತ್ತರ ಪದಗಳು ಅಂಶೀಂಶೀ ಭಾವ ಸಂಬಂಧದಿಂದ ಸೇರಿ ಪೂರ್ವ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸ ಎಂದು ಕರೆಯುತ್ತಾರೆ.
22. ಅಂಶಿ ಸಮಾಸಕ್ಕೆ ಉದಾ. ಕೈಯ + ಅಡಿ + ಅಂಗೈ
23. ಸಮಾಸ ರಚನೆಯಲ್ಲಿ ಎರಡು ಅಥವಾ ಹಲವು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥವೂ ಪ್ರಧಾನವಾಗುಳ್ಳ ಸಮಾಸವೇ ದ್ವಂದ್ವ ಸಮಾಸ .
24. ದ್ವಂದ್ವ ಸಮಾಸಕ್ಕೆ ಉದಾ. ಕೆರೆಯೂ + ಬಾವಿಯೂ + ಕೆಟ್ಟೆಯೂ = ಕೆರೆಬಾವಿಕಟ್ಟೆಗಳು .
25. ಸಮಾಸ ರಚನೆಯಲ್ಲಿ ಪೂರ್ವ ಪದ ನಾಮಪದವಾಗಿದ್ದು ಉತ್ತರ ಪದ ಕ್ರಿಯಾಪದವಾಗಿದ್ದು ಅವೆರಡೂ ಸೇರಿ ಆಗುವ ಸಮಾಸವೇ ಕ್ರಿಯಾ ಸಮಾಸ.
26. ಕ್ರಿಯಾ ಸಮಾಸಕ್ಕೆ ಉದಾ. ಕೈಯನ್ನು + ಮುಟ್ಟಿ + ಕೈ ಮುಟ್ಟು.
27. ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾಗುವಾಗ ಬೇರೊಂದು ಪದದ ಅರ್ಥ ಪ್ರಧಾನವಾಗಿದ್ದರೆ . ಅದನ್ನು ಬಹುವ್ರಿಹಿ ಸಮಾಸ ಎನ್ನುವರು.
28. ಬಹುವ್ರಿಹಿ ಸಮಾಸಕ್ಕೆ ಉದಾ. ಮೂರು + ಕಣ್ಣುಉಳ್ಳವ = ಮುಕ್ಕಣ್ಣ – ( ಶಿವ ).
29. ಪೂರ್ವ ಪದವು ಸರ್ವನಾಮ ಅಥವಾ ಕೃದಂತವಾಗಿದ್ದು ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವೇ ಗಮಕ ಸಮಾಸ .
30. ಗಮಕ ಸಮಾಸಕ್ಕೆ ಉದಾ. ಇವನು + ಗಂಡಸು = ಈ ಗಂಡಸು .
31. ಕಾವ್ಯದ ಸೌಂದರ್ಯವನ್ನು ಉಂಟುಮಾಡುವ ಶಬ್ದ ಮತ್ತು ಅರ್ಥ ಚಮತ್ಕಾರಕ್ಕೆ ಅಲಂಕಾರ ಎನ್ನುವರು.
32. ಶಬ್ದ / ಅಕ್ಷರಗಳ ಜೋಡನೆಯ ಚಮತ್ಕಾರದಿಂದ ಕಾವ್ಯ ಅಥವ ಮಾತಿನ ಸೌಂದರ್ಯ ಹೆಚ್ಚಿದ್ದರೆ ಅದೇ ಶಬ್ದಾಲಂಕಾರ
33. ಪದಗಳ ಅರ್ಥ ಚಮತ್ಕಾರದಿಂದ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿಸಿದರೆ ಅದನ್ನು ಅರ್ಥಾಲಂಕಾರ ಎಂದು ಕರೆಯುವರು .
34. ವಾಕ್ಯದಲ್ಲಿ ಕವಿ ಯಾವ ವಸ್ತುವನ್ನು ವರ್ಣಿಸುತ್ತಾನೋ ಅದೇ ವರ್ಣ್ಯ ಅಥವಾ ಉಪಮೇಯ
35. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಅಥವಾ ಮಾನವನ್ನಾಗಿ ಇಟ್ಟುಕೊಂಡು ವರ್ಣಿಸಲಾಗಿದೆಯೋ ಆ ವಸ್ತುವೇ ಅವರ್ಣ್ಯ ಅಥವ ಉಪಮಾನ.
36. ಉಪಮಾ ಎಂದರೆ ಹೋಲಿಕೆ ಎಂದರ್ಥ ಉಪಮೇಯ ಉಪಮಾನಗಳೊಳಗೆ ಉಪಮಾನ ( ಹೋಲಿಕೆ ) ಇರುವ ಅಲಂಕಾರವೇ ಉಪಮಾಲಂಕಾರ .